siddeshwara swamiji quotes in kannada

siddeshwara swamiji quotes in kannada



ಇಲ್ಲಿವೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹತ್ತು ನುಡಿ ಮುತ್ತು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎನ್ನುವಂತೆ ಮುತ್ತಿನಂತ ಮಾತುಗಳನ್ನು ತಮ್ಮ ಪ್ರವಚನ ಮುಖೇನ ಹೇಳುತ್ತಿದ್ದವರು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಅವರು ಹೇಳಿದ 10 ಮುತ್ತಿನಂತಾ ಮಾತುಗಳು ನಿಮಗಾಗಿ..


ಸಿದ್ದೇಶ್ವರ ಸ್ವಾಮೀಜಿ ನುಡಿ ನಮನ

ಸೂರ್ಯನ ಕಿರಣಗಳು ಕೊಳಕು ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ ಆಗಬೇಕು. ಯಾವ ಜಾಗಕ್ಕೆ ಹೋದರೂ, ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು. 

ಗೆದ್ದವರಷ್ಟೇ ಬದುಕಿನ ಪಾಠ ಹೇಳಬೇಕಿಲ್ಲ. ಸೋತವರು ಅದಕ್ಕಿಂತಲೂ ಚೆಂದದ ಪಾಠ ಕಲಿತಿರುತ್ತಾರೆ. ಅವರಿಂದಲೂ ಅನುಭವದ ಪಾಠ ಕಲಿಯಬಹುದು.

ಮಣ್ಣಿನಿಂದಾದ ಗಡಿಗೆಯು ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಗಡಿಗೆಯೊಳಗೆ ಮಣ್ಣು ಕಾಣುವುದಿಲ್ಲ. ಆದರೆ ಅದು ಅಲ್ಲಿ ವ್ಯಾಪಿಸಿದೆ. ಅಂತೆಯೇ ಜಗದೀಶನು ಪ್ರಪಂಚದ ತುಂಬಾ ವ್ಯಾಪಿಸಿದ್ದಾನೆ. ಆದರೆ, ಆತ ಕಾಣುವುದಿಲ್ಲ. 

ಮಡದಿ ಬಂದ ಮೇಲೆ ಒಡಹುಟ್ಟಿದವರು ಭಾರ, ಆಸ್ತಿ ಭಾಗವಾದ ಮೇಲೆ ಹೆತ್ತವರು ಭಾರ, ಗಂಡ ತೊರೆದ ಹೆಣ್ಣು ತವರಿಗೆ ಭಾರ, ಮೋಹ ಕಳೆದ ಮೇಲೆ ಸಂಸಾರ ಭಾರ, ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರ

ಇರೋದು ಇರುತ್ತದೆ ಹೋಗೋದು ಹೋಗುತ್ತದೆ

ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮದಾನಿಯಾಗಿರಬೇಕು

ಇದೆ ಸುಖ ಜೀವನದ ಸೂತ್ರ. 

ನಮ್ಮ ಸಾಧನೆಯು ಪ್ರಾಪಂಚಿಕವೇ ಆಗಿರಲಿ, ಪಾರಮಾರ್ಥಿಕವೇ ಆಗಿರಲಿ, ಅದು ಸಿದ್ಧಿಯ ಶ್ರೀಗಿರಿ ತಲುಪುವುದಕ್ಕೆ ಅನನ್ಯ ಪ್ರಾರ್ಥನೆ ಅಥವಾ ತೀವ್ರವಾದ ಹಂಬಲ, ಬಯಕೆ ಅತ್ಯವಶ್ಯ.


ಯಾರ ನೋವಿಗೆ ಯಾರು ಹೊಣೆಗಾರರು

ನಿನ್ನ ಕಣ್ಣೀರಿಗೆ ಯಾರು ಮರುಗುವರು

ನಿನಗೆ ನೀನೇ ಮಿತ್ರ ನಿನಗೆ ನೀನೇ ಶತ್ರು

ನಿನ್ನಿಂದಲೇ ಶಾಂತಿ ನಿನ್ನಿಂದಲೇ ಕ್ರಾಂತಿ!


ಸಿದ್ದೇಶ್ವರ ಸ್ವಾಮೀಜಿ ಕವನಗಳು


ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ. ಇವರು ಯಾವತ್ತೂ ಯಾವುದೇ ವಸ್ತುಗಳಿಗೆ ಆಸೆಪಟ್ಟಿಲ್ಲ, ತಮ್ಮ ಬಳಿ ಏನೇ ವಸ್ತು ಇರಬಾರದು ಎಂಬ ಉದ್ದೇಶಕ್ಕೆ ಜೇಬು ಇಲ್ಲದ ಅಂಗಿ ಧರಿಸುತ್ತಿದ್ದರು. ತಮಗೆ ಬಂದಂಥ ಪದ್ಮಶ್ರೀ ಸೇರಿ ಹಲವಾರು ಪ್ರಶಸ್ತಿಗಳನ್ನು ನಯವಾಗಿ ಬೇಡ ಎಂದಂಥ ಮೇರು ವ್ಯಕ್ತಿತ್ವ. ತಮ್ಮ ಜೀವನವನ್ನು ಧರ್ಮಕ್ಕಾಗಿ ಮೀಸಲಾಗಿಟ್ಟ ಮಹಾನ್ ಯೋಗಿ.

ಇವರ ಪ್ರವಚನಗಳು ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸುವಂಥ ಶಕ್ತಿ ಹೊಂದಿದ್ದೆವು. ಇವರ ಪ್ರವಚನ ಕೇಳಲು ಸಾವಿರಾರು ಜನರು ಸೇರುತ್ತಿದ್ದರು. ಇವರ ಒಂದೊಂದು ಪ್ರವಚನಗಳು ಜನ ಸಾಮಾನ್ಯ ಬದುಕಿಗೆ ತುಂಬಾ ಹತ್ತಿರವಾಗುತ್ತಿತ್ತು, ತಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಬೆಳಕನ್ನು ತೋರಿಸುವಂತಿರುತ್ತಿತ್ತು, ಇವರ ಪ್ರವಚನಗಳು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ.


ಅದರಲ್ಲೂ ಶ್ರೀಗಳು ನುಡಿದ ಈ ಮಾತುಗಳು ಪ್ರತಿಯೊಬ್ಬರ ಬದುಕಿಗೂ ಅನ್ವಯಿಸುವಂತಿದೆ...

ಮನೆ ಕಟ್ಟುವಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ. ನಂತರ ಗೃಹಪ್ರವೇಶಕ್ಕೆ ಎಲ್ಲರೂ ಬಂದು ಹಾರೈಸಿ ಉಡುಗೊರೆ ನೀಡುತ್ತಾರೆ. ಹಾಗೆ ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರೂ ಸಹಾಯ ಮಾಡುವುದಿಲ್ಲ. ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ. ಇದೇ ನಿಜವಾದ ಪ್ರಪಂಚ. 

ಸಿದ್ದೇಶ್ವರ ಸ್ವಾಮೀಜಿ ಪ್ರವಚನ

ಬದುಕು ಹೇಗಿರಬೇಕು?-ಸಿದ್ದೇಶ್ವರ ಸ್ವಾಮೀಜಿಯ ನುಡಿಮುತ್ತುಗಳು

ಅಮೂಲ್ಯವಾದ ನಮ್ಮ ಬದುಕನ್ನು ನಾವು ಎಂದೂ ಉಪೇಕ್ಷಿಸಬಾರದು, ತಿರಸ್ಕರಿಸಬಾರದು. ಇನ್ನೊಮ್ಮೆ ಈ ಜಗತ್ತಿಗೆ ಬರುವುದೇ ಬೇಡ, ಬದುಕುವುದೇ ಬೇಡ ಎನ್ನುವಂತೆ ಬದುಕಬಾರದು

ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಮತ್ತೆ ಮತ್ತೆ ನೋಡಲು ಬರುತ್ತೇನೆ, ಈ ಜಗತ್ತನ್ನು, ಈ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೇನೆ ಎಂಬ ಉತ್ಸಾಹ ನಮ್ಮಲ್ಲಿರಬೇಕು

-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಸಿದ್ದೇಶ್ವರ ಸ್ವಾಮೀಜಿ ಫೋಟೋ



ಸಿದ್ದೇಶ್ವರ ಸ್ವಾಮೀಜಿ ಜೀವನ ಚರಿತ್ರೆ

ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗಪ್ರಸಿದ್ದರಾಗಿದ್ದರು, ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಜೈನ ಧರ್ಮದಂತೆ ಆಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದ್ದರು.

ಹಿತ ನುಡಿಗಳು

ಮನಸ್ಸು ಹಾಗೂ ಮಾತಿನ ಸಂಬಂಧ

ಮನಸ್ಸು ಮಲಿನವಾದರೆ ಮಾತು ಕಲ್ಮಶವಾಗಿ ಹೊರಡುತ್ತದೆ

ಹೃದಯ ಪರಿಮಳ, ಮಾತು ಮಕರಂದ

-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ




Post a Comment

0 Comments